ಪರಿಸರವನ್ನು ಸಂರಕ್ಷಿಸಲು ಒಂದು ಸಂಸ್ಥೆ ಕೈಗೊಳ್ಳುವ ಪೂರ್ವನಿಧಾರಿತ, ನಿಯಮಬದ್ಧವಾದ ಕ್ರಮಗಳನ್ನು ಪರಿಸರ ನಿರ್ವಹಣಾ ವ್ಯವಸ್ಥೆ( []) ಎಂದು ಕರೆಯಬಹುದು.ಸಾಮಾನ್ಯವಾಗಿ ಬಳಕೆಯಾಗುವ ಪರಿಸರ ನಿರ್ವಹಣಾ ವ್ಯವಸ್ಥೆ ಐ.ಎಸ್.ಓ ೧೪೦೦೧() ನ ಮೇಲೆ ನಿರ್ಧಾರಿತವಾಗಿದೆ. ಅದಕ್ಕೆ ಪರ್ಯಾಯವಾಗಿ ( ) ಅನ್ನು ಕೂಡಾ ಬಳಸಬಹುದು. == ಗುರಿಗಳು == ಪರಿಸರ ನಿರ್ವಹಣಾ ವ್ಯವಸ್ಥೆಯ ಗುರಿಗಳೆಂದರೆ ತ್ಯಾಜ್ಯ ನಿಯಂತ್ರಣ ಮತ್ತು ನಿಯಮಪಾಲನೆ === ನಿಯಮ ಪಾಲನೆ === ಕಂಪೆನಿಯ ಕಾರ್ಯನಿರ್ವಹಣೆಗೆ ಸರ್ಕಾರದ ಕೆಲವು ನಿಯಮಗಳ ಪಾಲನೆ ಅತ್ಯಗತ್ಯ. ಈ ಕನಿಷ್ಟತಮ ನಿಯಮಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ. === ತ್ಯಾಜ್ಯ ನಿರ್ವಹಣೆ === ಪರಿಸರ ಸಂಬಂಧಿ ನಿಯಮಗಳನ್ನು ರೂಪಿಸಲು,ನಿರ್ವಹಿಸಲು, ಮತ್ತು ವೀಕ್ಷಿಸಲು ಪರಿಸರ ನಿರ್ವಹಣಾ ವ್ಯವಸ್ಥೆ ಸಹಾಯ ಮಾಡುತ್ತದೆ. ತ್ಯಾಜ್ಯ ನಿರ್ವಹಣೆ ಎಂಬುದು ವ್ಯವಸ್ಥೆಯ ವಿನ್ಯಾಸದಿಂದ ಶುರುವಾಗಿ ತ್ಯಾಜ್ಯದ ಪುನರ್ಬಳಕೆಯ ತನಕದ ಎಲ್ಲ ಹಂತದವರೆಗೂ ಮುಖ್ಯವಾಗುತ್ತದೆ. == ಮುಖ್ಯಾಂಶಗಳು == ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಪರಿಸರ ಸಂಬಂಧಿ ತರಬೇತಿ ಕೈಗೊಳ್ಳುವ ಇದು ಕಂಪೆನಿಯ ನಿರ್ವಹಣಾ ಮಂಡಳಿಗೆ ಪರಿಸರ ಸಂಬಂಧಿ ಸಲಹೆ,ಮಾಹಿತಿಗಳನ್ನು ನೀಡುವ ವ್ಯವಸ್ಥೆಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಕಂಪೆನಿಗೆ ಸಂಬಂಧಪಟ್ಟ ಪರಿಸರ ಸಂಬಂಧಿ ವಿಷಯಗಳನ್ನು ನೋಡಿಕೊಳ್ಳುವ ಒಂದು ನಿಯಮಬದ್ಧ ವ್ಯವಸ್ಥೆ ಇದು ಕಂಪೆನಿಯ ಉತ್ಪನ್ನಗಳಿಂದ ಸದ್ಯಕ್ಕೆ ಮತ್ತು ಭವಿಷ್ಯದಲ್ಲಿ ಪರಿಸರದ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಿ ಅವುಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ ಕಂಪೆನಿಯ ಪಾಲುದಾರರು ಮತ್ತು ಉತ್ಪನ್ನಗಳ ಸರಬರಾಜುದಾರರು ತಮ್ಮದೇ ಆದ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸುವಂತೆ ಪ್ರೋತ್ಸಾಹಿಸುತ್ತದೆ. ಕಂಪೆನಿಯ ಉದ್ಯೋಗಿಗಳಿಗೆ ತಮ್ಮ ಕಾರ್ಯದಲ್ಲಿ ಪರಿಸರ ಸಂಬಂಧಿ ಜವಾಬ್ದಾರಿಗಳನ್ನು ಹಂಚುತ್ತದೆ ಇದಕ್ಕಾಗಿ ಬೇಕಾದ ತರಬೇತಿಯನ್ನು ಕೊಡಲು ಮತ್ತು ಫಲಿತಾಂಶಗಳನ್ನು ಅವಲೋಕಿಸಲು ಒಂದು ವ್ಯವಸ್ಥೆಯನ್ನು ನಿರ್ಮಿಸುತ್ತದೆ ಸಂಬಂಧಿತ ಶಾಸನಗಳನ್ನು ಅರ್ಥ ಮಾಡಿಕೊಂಡು ಆ ನಿಟ್ಟಿನಲ್ಲಿ ಉತ್ಪನ್ನಗಳನ್ನು ಕೇಂದ್ರೀಕರಿಸಲು ಸಹಕರಿಸುತ್ತದೆ. == ಕಾರ್ಯನಿರ್ವಹಣಾ ವ್ಯವಸ್ಥೆ == ಪರಿಸರ ನಿರ್ವಹಣಾ ವ್ಯವಸ್ಥೆ ಯೋಜಿಸು-ಮಾಡು-ವೀಕ್ಷಿಸು-ಕೆಲಸ ಮಾಡು( )ಎಂಬ ವರ್ತುಲ ನಿಯಮದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿ ಮೊದಲಿಗೆ ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗುತ್ತದೆ. ನಂತರ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಕಾರ್ಯರೂಪಕ್ಕೆ ಬಂದ ವ್ಯವಸ್ಥೆಯನ್ನು ವೀಕ್ಷಿಸಿ ಅದರಲ್ಲಿನ ಲೋಪದೋಷಗಳನ್ನು ಗಮನಿಸಿ ಅದನ್ನು ಸರಿಪಡಿಸಲು ಕಾರ್ಯನಿರ್ವಹಿಸಲಾಗುತ್ತದೆ. ನಿರಂತರ ಬದಲಾವಣೆಗಳ ಮೂಲಕ ಈ ವ್ಯವಸ್ಥೆ ಉತ್ತಮಪಡಿಸಿಕೊಳ್ಳುತ್ತಾ ಸಾಗುತ್ತದೆ. == ಉಲ್ಲೇಖಗಳು ==